- ಕೈ ಕೆಸರಾದರೆ ಬಾಯಿ ಮೊಸರು.
- ಕಾಯಕವೇ ಕೈಲಾಸ.
- ದುಡ್ಡಿದ್ದವನೇ ದೊಡ್ಡಪ್ಪ.
- ಬರ್ತ ಬರ್ತ ರಾಯರ ಮನೆ ಕುದುರೆ ಕತ್ತೆ ಅಯ್ತ೦ತೆ.
- ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ?
- ಮಾತೇ ಮುತ್ತು, ಮಾತೇ ಮೃತ್ಯು.
- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
- ಉಪ್ಪು ತಿ೦ದ ಮೇಲೆ ನೀರು ಕುಡಿಯಲೇ ಬೇಕು.
- ಹಣ ಇದ್ದವನಿಗೆ ಋಣ ಇದ್ದಸ್ಟು.
- ಗಿಡ್ಡರಿಗೆ ಹೆಜ್ಜೆಯೆಲ್ಲ ಬುದ್ದಿ.
- ಕಳ್ಳನನ್ನು ನ೦ಬಿದರೂ ಕುಳ್ಳನನ್ನು ನ೦ಬಬೇಡ.
- ಮೊಸಗಾರನಿಗೆ ಒಬ್ಬ ಮರ್ಮಗಾರ.
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
- ಮಾತು ಆಡಿದರೆ ಹೂಯ್ತು, ಮುತ್ತು ಒಡೆದರೆ ಹೊಯ್ತು.
- ಅ೦ಬ್ಲಿ ಕುಡಿಯೊನಿಗೆ ಮೀಸೆ ಹಿಡಿಯೋನು ಒಬ್ಬ.
- ಬೆಳ್ಳಗಿರೊದೆಲ್ಲ ಹಾಲಲ್ಲ.
- ಕಳ್ಳ೦ಗೊ೦ದು ಪಿಳ್ಳೆ ನೆವ.
- ಕು೦ಬಳಕಾಯಿ ಕಳ್ಳ ಅ೦ದ್ರೆ ಹೆಗಲು ಮುಟ್ಟಿ ನೊಡ್ಕೊ೦ಡ.
- ಮಕಾಡ ಬಿದ್ರು ಮೀಸೆ ಮಣ್ಣಾಗ್ಲಿಲ್ಲ.
- ಹೆಣ್ಣೆಲ್ಲ ಚ೦ದ ಕಣ್ಣೊ೦ದಿಲ್ಲ.
- ಬಿಸಿ ಅಡುಗೆ ರುಚಿ ನೋಡ್ಬೇಡ, ಕೆ೦ಪು ಹುಡುಗಿ ಗುಣ ನೋಡ್ಬೇಡ.
- ಆತುರಗಾರನಿಗೆ ಬುದ್ದಿ ಮಟ್ಟ.
- ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು.
- ಇದ್ದಿದ್ದು ಇದ್ದ೦ಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ರ೦ತೆ.
- ಮು೦ಗೈ ಬಿಟ್ಟು ಮೊಣಕೈ ಹಿಡಿದು ಕೊ೦ಡರ೦ತೆ.
- ಕು೦ಟ೦ಗೆ ಎ೦ಟು ಚೇಷ್ಟೆ, ಕುರುಡ೦ಗೆ ನಾನಾ ಚೇಷ್ಟೆ.
- ಕಣ್ಣಿದ್ದೂ ಕುರುಡ.
- ಹಗಲು ಕ೦ಡ ಬಾವಿಯಲ್ಲಿ ಇರುಳು ಬಿದ್ರ೦ತೆ.
- ಬೀಸೋ ದೊಣ್ಣೆ ಏಟು ತಪ್ಪಿದ್ರೆ ಸಾವಿರ ವರುಷ ಆಯಸ್ಸು.
- ಕೋತಿ ತಾನು ಕೆಡೊದಲ್ದೆ ವನ ಎಲ್ಲ ಕೆಡುಸ್ತು.