ಬಂಡೀಪುರ ಪ್ರವಾಸ
ಇಂದು, ನಾವು ಗೆಳೆಯರೆಲ್ಲರು ಮೈಸೂರು ಪ್ರವಾಸ ಕೈಗೊಂಡೆವು. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂಡೀಪುರ ನಮ್ಮ ಪ್ರವಾಸದಲ್ಲಿ ಪ್ರಮುಖವಾಗಿದ್ದವು. ಅಂದು ಮುಂಜಾನೆ (ಅಂದರೆ ಶನಿವಾರ), ಒಂದು ಟೆಂಪೋ ಟ್ರಾವಲ್ಲೆರ್ ಗಾಡಿಯನ್ನು ಮಾಡಿಕೊಂಡು ಹೊರಟೆವು.
ನಾವು ಗೆಳೆಯರು ಅಂದರೆ ಮಾಮ, ಶ್ರೀಕಿ, ಬೋಂಡ, ಚೇತನ್, ಹೌಸೀ, ಶಶಾಂಕ್ ಹಾಗು ವಿವೇಕ್ ಬೆಂಗಳೂರಿನಿಂದ ಹೊರಟೆವು. ಬೆಂಗಳೂರನ್ನು ಬಿಟ್ತಾಗ ಸುಮಾರು ೮:೩೦ ಘಂಟೆಯಾಗಿತ್ತು. ಸುಮಾರು ೧೦:೩೦ ರ ಸಮಯದಲ್ಲಿ ಮದ್ದೂರನ್ನು ತಲುಪಿದೆವು. ಆಲ್ಲಿ ಬೆಳಗಿನ ತಿಂಡಿ, ಕಾಫಿ ಮುಗಿಸಿದ ನಂತರ ಹೊರಟ ಪ್ರಯಾಣ ಮಧ್ಹ್ಯಾನ ಸುಮಾರು ೧೨:೦೦ ಶ್ರೀರಂಗಪಟ್ಟಣ್ಣ ಮುಟ್ಟಿತು. ಅಂದು ಶ್ರೀರಂಗಪಟ್ಟಣ್ಣದಲ್ಲಿ ಸಂತೆ. ಸರಿ, ಸಂತೆಯಲ್ಲಿ ಸಿಕ್ಕ ಸಾಮಾನುಗಳ್ಳನ್ನು ಕೊಳ್ಳುವ ಸರದಿಯಾಗಿತ್ತು. ಮರಸೇಬು, ಸೀಬೆಕಾಯಿ, ದ್ರಾಕ್ಷಿ, ದಾಳಿಂಬೆ, ಕಡಲೆಕಾಯಿ ಹೀಗೆ ಸಿಕ್ಕ ಹಣ್ಣುಗಳ್ಳನ್ನು, ಕಾಯಿಗಳ್ಳನ್ನು ಮನ್ನಸ್ಸಿಗೆ ಹಿಡಿಸುವಷ್ಟು ಕೊಂಡೆವು. ನಂತರ ಮುಂದುವರಿದ ಪ್ರಯಾಣ ಸುಮಾರು ೧:೪೫ ಸಮಯದಲ್ಲಿ ಮೈಸೂರನ್ನು ಮುಟ್ಟಿದೆವು. ಆಲ್ಲಿ ತಿಪ್ಪಿಯನ್ನು, ಓಳು ರವಿಯನ್ನು ಕರೆದುಕೊಂಡು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಟೆವು.
ಅಂದು ಮೈಸೂರಿನಲ್ಲಿ ಮಳೆ ಸುರಿಯುತಿತ್ತು. ದಾಖಲೆಯ ಪ್ರಮಾಣದಲ್ಲಿ ಮೈಸೂರಿನ ಸುತ್ತ ಮುತ್ತ ಆ ತಿಂಗಳು ಮಳೆಯಾಗಿತ್ತು. ನಂಜನಗೂಡಿನ ಸಮೀಪವಿರುವ ಒಂದು ನದಿ ತುಂಬಿ ಹರಿಯುತಿತ್ತು.


ತುಂಬಿ ಹರಿಯುತ್ತಿರುವ ನದಿ
ಬೆಟ್ಟಕ್ಕೆ ಹೊರಟ ಹುರುಪಿನಲ್ಲಿ ಮಧ್ಹ್ಯಾನದ ಊಟವನ್ನೆ ಮರೆತ್ತಿದ್ದೆವು. ಹೊಟ್ಟೆ ಚುರ್ ಯನ್ನುವ ಹೊತ್ತಿಗೆ ನಾವು ಒಂದು ಸಣ್ಣ ಹೊಟೆಲ್ ಕೂಡ ಇರದ, ಬೆಟ್ಟಕ್ಕೆ ಸಮೀಪವಿರುವ ಊರಿನ ಬಳಿ ಬಂದೆವು. ಈ ಊರಿನ ಸುತ್ತ ದಟ್ಟವಾದ ಕಾಡು. ನಾವು ಈ ಕಾಡನ್ನು ದಾಟಿ ಬೆಟ್ಟಕ್ಕೆ ಹೋಗಬೇಕಾಗಿತ್ತು. ಸರಿ, ಆ ಊರಿನ ಒಂದು ಸಣ್ಣ ಅಂಗಡಿಯಲ್ಲಿ ಎರಡು ಗೊನೆ ಬಾಳೆ ಹಣ್ಣನ್ನು ಖರೀದಿಸಿ, ಪ್ರಯಾಣವನ್ನು ಮುಂದುವರಿಸಿದೆವು. ಆದರೆ ಚಪ್ಪರ್ ಗಳೆಲ್ಲ ಸೇರಿ, ಬರೀ ಐದು ನಿಮಿಷದಲ್ಲಿ ಎರಡು ಗೊನೆ ಬಾಳೆಹಣ್ಣನ್ನು ಖಾಲಿ ಮಾಡಿದರು. ಅರ್ಧ ತುಂಬಿದ ಹೊಟ್ಟೆಯಲ್ಲೆ ಮುಂದುವರಿದ ಪ್ರಯಾಣ ಬೆಟ್ಟದ ಬುಡದಲ್ಲಿರುವ ಸರ್ಕಾರದ ಚೆಕ್ಕ್ ಪೋಸ್ಟ್ ಬಳಿ ನಿಂತಿತು. ಆಲ್ಲಿ ಅವರ ಅನುಮತಿ ಪಡೆದ ನಂತರ ಬೆಟ್ಟ ಹತ್ತಲು ಶುರು ಮಾಡಿದೆವು.

ಬೆಟ್ಟಕ್ಕೆ ಹೋಗುವ ದಾರಿ